>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.

Hamburger Menu Icon
<?$policy_img['alt']?>

ನಮ್ಮ ಸಾಲದ ಆಫರ್‌ಗಳ ನಿಯಮ ಮತ್ತು ಷರತ್ತುಗಳು

Credit Card – Pongal Offer

1. Offer Period: 12th Jan 26 to 18th Jan 26

2. ಈ ಆಫರ್ ಭಾರತದಾದ್ಯಂತದ ಗ್ರಾಹಕರಿಗೆ ಅನ್ವಯವಾಗುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಆರ್‌ಬಿಎಲ್ ಬ್ಯಾಂಕ್ ಲಿಮಿಟೆಡ್ ("ಆರ್‌ಬಿಎಲ್") ನ ಸ್ವಂತ ವಿವೇಚನೆಯಿಂದ ನೀಡಲಾಗುತ್ತದೆ

3. This offer is exclusively available to new customers applying for the TVS Credit RBL Bank co-brand credit card. To qualify for the offer, customers must complete the V-KYC verification or schedule biometric KYC verification before 18/01/2026 at 11:59 PM, also complete the co-brand card setup, and activate the credit card within 37 days

4. Upon approval of the credit card, customers will receive a voucher worth ₹100/- before 31/03/2026, which shall be sent to their registered mobile numbers via SMS/WhatsApp.

5. ವೌಚರ್‌ಗಳನ್ನು ಅಮೆಜಾನ್ ರಿಟೇಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ("ಅಮೆಜಾನ್") ಒದಗಿಸುತ್ತದೆ. ವೌಚರ್ ರಿಡೆಂಪ್ಶನ್‌ಗಾಗಿ ದಯವಿಟ್ಟು ಅಮೆಜಾನ್‌ನ ನಿಯಮ ಮತ್ತು ಷರತ್ತುಗಳನ್ನು ನೋಡಿ. ಅಮೆಜಾನ್ ವೌಚರ್ ರಿಡೆಂಪ್ಶನ್‌ಗೆ ಸಂಬಂಧಿಸಿದ ಯಾವುದೇ ವಿವಾದದ ಸಂದರ್ಭದಲ್ಲಿ, ಟಿವಿಎಸ್ ಕ್ರೆಡಿಟ್ ಹೊಣೆಗಾರನಾಗಿರುವುದಿಲ್ಲ.

6. ಅಪ್ಲಿಕೇಶನ್ ರದ್ದತಿ ಅಥವಾ ತಿರಸ್ಕಾರವು ಗ್ರಾಹಕರನ್ನು ವೌಚರ್‌ಗೆ ಅನರ್ಹರನ್ನಾಗಿಸುತ್ತದೆ.

7. ಈ ಆಫರ್‌ನಿಂದ ಉಂಟಾಗುವ ಯಾವುದೇ ವಿವಾದಗಳು ಚೆನ್ನೈ ನ್ಯಾಯವ್ಯಾಪ್ತಿಗೆ ಒಳಪಡುತ್ತದೆ.

ಜುಪಿಟರ್ 1% ಪಿಎಫ್ ಮನ್ನಾ ಆಫರ್

1. ಆಫರ್ ಅವಧಿ: 01/01/2026 ರಿಂದ 31/01/2026.

2. ಈ ಆಫರ್ ಜುಪಿಟರ್ ವಿತರಣೆಯ ಮೊದಲ 500 ಕೇಸ್‌ಗಳಿಗೆ ಮಾತ್ರ ಮಾನ್ಯ - (ಜುಪಿಟರ್ 110 ಮತ್ತು ಜುಪಿಟರ್ 125).

3. ಈ ಆಫರ್ ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಮಾತ್ರ ಮಾನ್ಯ.

4. ಈ ಆಫರ್ ಅಸ್ತಿತ್ವದಲ್ಲಿರುವ ಮುಂಚಿತ-ಅನುಮೋದಿತ ಸಾಲದ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ

ಐಕ್ಯೂಬ್ 1% ಪಿಎಫ್‌ ಮನ್ನಾ ಆಫರ್

1. ಆಫರ್ ಅವಧಿ: 01/01/2026 ರಿಂದ 31/01/2026.

2. ಈ ಆಫರ್ ಐಕ್ಯೂಬ್ ವಿತರಣೆಯ ಮೊದಲ 50 ಕೇಸ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

3. ಈ ಆಫರ್ ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಾತ್ರ ಮಾನ್ಯ.

4. ಈ ಆಫರ್ ಅಸ್ತಿತ್ವದಲ್ಲಿರುವ ಮುಂಚಿತ-ಅನುಮೋದಿತ ಸಾಲದ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ.

ಕನ್ಸ್ಯೂಮರ್ ಲೋನ್‌ಗಳೊಂದಿಗೆ ಪೊಂಗಲ್ ಮತ್ತು ಸಂಕ್ರಾಂತಿ ₹ 3,000 ಕ್ಯಾಶ್‌ಬ್ಯಾಕ್ ಆಫರ್:

1. *ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಮಾತ್ರ ಸಾಲ.

2. ಆಫರ್ ಅವಧಿ: 10/01/2026 ರಿಂದ 18/01/2026.

3. ಈ ಆಫರ್ ತಮಿಳುನಾಡು, ಪುದುಚೇರಿ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದ ಆಯ್ದ ಟಿವಿಎಸ್ ಕ್ರೆಡಿಟ್ ಆರ್‌ಆರ್ ಔಟ್ಲೆಟ್‌ಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ.

4. 12 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ₹35,000 ಸಾಲದ ಮೊತ್ತದ ಗೃಹೋಪಯೋಗಿ ವಸ್ತುಗಳಿಗೆ ಗರಿಷ್ಠ ₹3,000 ಕ್ಯಾಶ್‌ಬ್ಯಾಕ್ ಮತ್ತು ₹25,000 ಮತ್ತು ಅದಕ್ಕಿಂತ ಹೆಚ್ಚಿನ ಸಾಲದ ಮೊತ್ತದ ಸ್ಮಾರ್ಟ್‌ಫೋನ್‌ಗೆ ಗರಿಷ್ಠ ₹2000 ಮತ್ತು ಅದಕ್ಕಿಂತ ಹೆಚ್ಚಿನ ಕ್ಯಾಶ್‌ಬ್ಯಾಕ್‌ಗೆ ಮಾತ್ರ ಆಫರ್ ಮಾನ್ಯವಾಗಿರುತ್ತದೆ.

5. ಈ ಕ್ಯಾಶ್‌ಬ್ಯಾಕ್ 750 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವ ಅಥವಾ ಮುಂಚಿತ-ಅನುಮೋದಿತ ಟಿವಿಎಸ್ ಕ್ರೆಡಿಟ್ ಗ್ರಾಹಕರಿಗೆ ಮಾತ್ರ ಅರ್ಹವಾಗಿದೆ.

6. ಸಂಪೂರ್ಣ ಸಾಲ ಅವಧಿಯ ಯಶಸ್ವಿ ಪಾವತಿಯ ನಂತರ ಕ್ಯಾಶ್‌ಬ್ಯಾಕ್ ಅನ್ನು ಕ್ರೆಡಿಟ್ ಮಾಡಲಾಗುತ್ತದೆ.

7. ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ

ಇತ್ತೀಚಿನ ಸೋನಿ ಟಿವಿ ಆಫರ್ ಮೇಲೆ 1 ಇಎಂಐ ಕ್ಯಾಶ್‌ಬ್ಯಾಕ್

1. ಆಫರ್ ಅವಧಿ: 19/12/2025 ರಿಂದ 19/01/2026.

2. ಈ ಆಫರ್ 6 ತಿಂಗಳ ಡೌನ್ ಪೇಮೆಂಟ್‌ನೊಂದಿಗೆ 18 ತಿಂಗಳ ಅವಧಿಯ ಸಾಲದ ಸ್ಕೀಮ್ ಮೇಲೆ ಮಾತ್ರ ಮಾನ್ಯವಾಗಿರುತ್ತದೆ.

3. ತಮಿಳುನಾಡು ಮತ್ತು ಪುದುಚೆರಿಯ ಆಯ್ದ ಔಟ್ಲೆಟ್‌ಗಳ ಆಯ್ದ ಸೋನಿ ಬ್ರಾವಿಯಾ ಟಿವಿಗಳ ಮೇಲೆ ಮಾತ್ರ ಈ ಆಫರ್ ಮಾನ್ಯ.

4. ಗಡುವು ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಮೊದಲ 3 ಇಎಂಐ ಗಳ ಯಶಸ್ವಿ ಪಾವತಿಯ ನಂತರ 60 ದಿನಗಳ ಒಳಗೆ ಕ್ಯಾಶ್‌ಬ್ಯಾಕ್ ರಿವಾರ್ಡ್ ಅನ್ನು ಕ್ರೆಡಿಟ್ ಮಾಡಲಾಗುತ್ತದೆ.

ಸಾಮಾನ್ಯ ನಿಯಮ ಮತ್ತು ಷರತ್ತುಗಳು - ಗೃಹೋಪಯೋಗಿ ವಸ್ತುಗಳ ಆಫರ್‌ಗಳು ಮತ್ತು ಯೋಜನೆಗಳು

1. ಆಫರ್ ಮತ್ತು/ಅಥವಾ ಸ್ಕೀಮ್ ವೈಯಕ್ತಿಕ ಸ್ವೀಕೃತಿದಾರರನ್ನು ಮಾತ್ರ ಉದ್ದೇಶಿಸಿದೆ ಹಾಗೂ ಇದನ್ನು ಬೇರೆಯವರಿಗೆ ನಿಯೋಜಿಸಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ. ಹೆಚ್ಚುವರಿಯಾಗಿ, ಇದನ್ನು ಯಾವುದೇ ಇತರ ಪ್ರಮೋಷನ್‌ಗಳು ಅಥವಾ ರಿಯಾಯಿತಿಗಳೊಂದಿಗೆ ಸಂಯೋಜಿಸಿ ಬಳಸಲಾಗುವುದಿಲ್ಲ. ಆಫರ್ ಮತ್ತು/ಅಥವಾ ಸ್ಕೀಮ್ ಯಾವುದೇ ನಗದು ಮೌಲ್ಯವನ್ನು ಹೊಂದಿಲ್ಲ, ಅದರ ಮಾನ್ಯತಾ ಅವಧಿಯನ್ನು ಮೀರಿ ವಿಸ್ತರಿಸಲಾಗುವುದಿಲ್ಲ ಮತ್ತು ಯಾವುದೇ ರೀತಿಯಲ್ಲಿ ಚೌಕಾಶಿಗೆ ಒಳಪಡುವುದಿಲ್ಲ ಅಥವಾ ಬದಲಾವಣೆ ಮಾಡಲಾಗುವುದಿಲ್ಲ.

2. ಆಫರ್ ಮತ್ತು/ಅಥವಾ ಸ್ಕೀಮ್‌ನಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿರುತ್ತದೆ.

3. ಸಾಲ ಮಂಜೂರಾತಿಯು ಸಂಪೂರ್ಣವಾಗಿ ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.

4. ಸ್ಕೀಮ್ ಮತ್ತು ಕ್ಯಾಶ್‌ಬ್ಯಾಕ್ ಲೆಕ್ಕಾಚಾರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ, ಟಿವಿಎಸ್ ಕ್ರೆಡಿಟ್‌ನ ನಿರ್ಧಾರವು ಅಂತಿಮ, ನಿರ್ಣಾಯಕ ಮತ್ತು ಗ್ರಾಹಕರಿಗೆ ಬದ್ಧವಾಗಿರುತ್ತದೆ ಮತ್ತು ಗ್ರಾಹಕರು ವಿವಾದ ಅಥವಾ ಸವಾಲು ಮಾಡಲು ಅವಕಾಶವಿರುವುದಿಲ್ಲ.

5. ಈ ನಿಯಮಗಳು ಟಿವಿಎಸ್ ಕ್ರೆಡಿಟ್‌ನೊಂದಿಗೆ ಗ್ರಾಹಕರು ಸಹಿ ಮಾಡಿದ ಸಾಲದ ನಿಯಮ ಮತ್ತು ಷರತ್ತುಗಳು, ಕೆಎಫ್‌ಎಸ್, ಮಂಜೂರಾತಿ ಪತ್ರಕ್ಕೆ ಹೆಚ್ಚುವರಿಯಾಗಿರುತ್ತವೆ ಹೊರತು ಪರ್ಯಾಯವಾಗಿರುವುದಿಲ್ಲ ಅಥವಾ ಕಳೆಮಟ್ಟದ್ದಾಗಿರುವುದಿಲ್ಲ.

6. ಆಫರ್ ಮತ್ತು/ಅಥವಾ ಸ್ಕೀಮ್ ಅಡಿಯಲ್ಲಿ ಗ್ರಾಹಕರು ಖರೀದಿಸಿದ ಯಾವುದೇ ಸರಕುಗಳ ಬಳಕೆಯಿಂದ ಉಂಟಾಗುವ ಅಥವಾ ಸಂಬಂಧಿಸಿದ ಯಾವುದೇ ನಷ್ಟ, ಹಾನಿ ಅಥವಾ ಕ್ಲೈಮ್‌ಗೆ ಟಿವಿಎಸ್ ಕ್ರೆಡಿಟ್ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ; ಅಥವಾ ಅಂತಹ ಸರಕುಗಳ ವಿತರಣೆಯಿಂದ ಉಂಟಾದ ಯಾವುದೇ ಸಮಸ್ಯೆಗಳು ಸೇರಿವೆ. .

7. ಮಾರಾಟಗಾರರು ನೀಡುವ ಸರಕುಗಳ ಗುಣಮಟ್ಟ, ವಿತರಣೆ ಅಥವಾ ಇತರೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಟಿವಿಎಸ್ ಕ್ರೆಡಿಟ್ ಯಾವುದೇ ವಾರಂಟಿ ನೀಡುವುದಿಲ್ಲ ಅಥವಾ ಪ್ರಾತಿನಿಧ್ಯವನ್ನು ವಹಿಸುವುದಿಲ್ಲ. ಈ ಆಫರ್ ಮೂಲಕ ಗ್ರಾಹಕರು ಖರೀದಿಸಿದ ಸರಕುಗಳಿಗೆ ಸಂಬಂಧಿಸಿದ ಯಾವುದೇ ವಿವಾದ ಅಥವಾ ಕ್ಲೈಮ್ ಅನ್ನು ಗ್ರಾಹಕರು ನೇರವಾಗಿ ಮಾರಾಟಗಾರರೊಂದಿಗೆ ಪರಿಹರಿಸಿಕೊಳ್ಳಬೇಕು. ಈ ಸಂಬಂಧ ಟಿವಿಎಸ್ ಕ್ರೆಡಿಟ್‌ ಹೆಸರನ್ನು ಉಲ್ಲೇಖ ಮಾಡಬಾರದು ಅಥವಾ ಅದಕ್ಕೆ ಹೊಣೆಗಾರಿಕೆ ವಹಿಸಬಾರದು.

8. ಆಫರ್ ಮತ್ತು/ಅಥವಾ ಸ್ಕೀಮ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವ ಉದ್ದೇಶಕ್ಕಾಗಿ ಯಾವುದೇ ಮೋಸದ ಚಟುವಟಿಕೆಯನ್ನು ನಡೆಸುತ್ತಿರುವುದು ಕಂಡು ಬಂದರೆ ಆಫರ್ ಮತ್ತು/ಅಥವಾ ಸ್ಕೀಮ್ ಪ್ರಯೋಜನಗಳಿಂದ ಯಾವುದೇ ಮಾರಾಟಗಾರರು, ಡೀಲರ್, ಸ್ಟೋರ್ ಅಥವಾ ಗ್ರಾಹಕರನ್ನು ಅನರ್ಹಗೊಳಿಸುವ ಅಥವಾ ತೆಗೆದುಹಾಕುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಕಾಯ್ದಿರಿಸುತ್ತದೆ. ಈ ವಿಷಯದಲ್ಲಿ ಟಿವಿಎಸ್ ಕ್ರೆಡಿಟ್‌ನ ನಿರ್ಧಾರವು ಅಂತಿಮವಾಗಿರುತ್ತದೆ.

9. ಯಾವುದೇ ಕಾರಣಕ್ಕಾಗಿ ಪ್ರಾಡಕ್ಟನ್ನು ಎಲ್ಲಾದರೂ ನಿಷೇಧಿಸಲಾಗಿದ್ದಲ್ಲಿ ಮತ್ತು/ಅಥವಾ ಅಂತಹ ಕಾರ್ಯಕ್ರಮಗಳನ್ನು ನೀಡಲಾಗದ ಪ್ರಾಡಕ್ಟ್‌ಗಳಿಗೆ ಆಫರ್ ಮತ್ತು/ಅಥವಾ ಸ್ಕೀಮ್ ಲಭ್ಯವಿರುವುದಿಲ್ಲ. ಎಲ್ಲಾದರೂ ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದ್ದಲ್ಲಿ ಮತ್ತು/ಅಥವಾ ಯಾವುದಾದರೂ ಕಾರಣಕ್ಕಾಗಿ ಆಫರ್ ಮತ್ತು/ಅಥವಾ ಸ್ಕೀಮ್ ಅನ್ನು ಮಾಡಲಾಗುವುದಿಲ್ಲ/ಮುಂದುವರಿಸಲಾಗುವುದಿಲ್ಲ ಎಂಬ ಸಂದರ್ಭವಿದ್ದಲ್ಲಿ ಅದು ಲಭ್ಯವಿರುವುದಿಲ್ಲ.

10. ಆಫರ್ ಮತ್ತು/ಅಥವಾ ಸ್ಕೀಮ್‌ನ ಫಲಿತಾಂಶಗಳ ಬಗ್ಗೆ ಯಾವುದೇ ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಲು ಟಿವಿಎಸ್ ಕ್ರೆಡಿಟ್ ಬಾಧ್ಯತೆ ಹೊಂದಿರುವುದಿಲ್ಲ.

11. ಈ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಯಾವುದೇ ಆಫರ್ ಮತ್ತು/ಅಥವಾ ಸ್ಕೀಮ್ ಅನ್ನು ಪಡೆಯುವ ಯಾವುದೇ ವ್ಯಕ್ತಿಯು ಈ ಸಾಮಾನ್ಯ ನಿಯಮ ಮತ್ತು ಷರತ್ತುಗಳನ್ನು ಅಂಗೀಕರಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

12. ಆಫರ್ ಮತ್ತು/ಅಥವಾ ಸ್ಕೀಮ್‌ನಲ್ಲಿ ಭಾಗವಹಿಸುವ ಮೂಲಕ, ಗ್ರಾಹಕರು ಈ ಸಾಮಾನ್ಯ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಒಪ್ಪಿರುತ್ತಾರೆ. ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ ಮತ್ತು ಭಾಗವಹಿಸುವವರು ಅದನ್ನು ಅಂಗೀಕರಿಸಿರುತ್ತಾರೆ.

13. ಸರ್ಕಾರ, ಶಾಸನಬದ್ಧ ಪ್ರಾಧಿಕಾರಗಳು ಅಥವಾ ಭಾಗವಹಿಸುವ ಸಂಸ್ಥೆಗಳಿಗೆ ಪಾವತಿಸಬೇಕಾದ ಯಾವುದೇ ತೆರಿಗೆಗಳು, ಹೊಣೆಗಾರಿಕೆಗಳು ಅಥವಾ ಶುಲ್ಕಗಳಿದ್ದಲ್ಲಿ ಅದನ್ನು ಅರ್ಹ ಗ್ರಾಹಕರು ಮಾತ್ರವೇ ಭರಿಸಬೇಕು. ಹೆಚ್ಚುವರಿಯಾಗಿ, ಆಫರ್ ಮತ್ತು/ಅಥವಾ ಸ್ಕೀಮ್‌ಗೆ ಸಂಬಂಧಿಸಿದ ಯಾವುದೇ ಸೇವಾ ಶುಲ್ಕಗಳು ಅಥವಾ ಇತರ ಶುಲ್ಕಗಳು ಕೂಡ ಗ್ರಾಹಕರ ಜವಾಬ್ದಾರಿಯಾಗಿರಬಹುದು.

14. ಇಲ್ಲಿ ಒಳಗೊಂಡಿರುವ ಯಾವುದೂ ಕೂಡ, ಇದೇ ರೀತಿಯ ಅಥವಾ ಇತರ ಆಫರ್‌ಗಳು ಅಥವಾ ಸ್ಕೀಮ್‌ಗಳನ್ನು ನಡೆಸಲು ಟಿವಿಎಸ್ ಕ್ರೆಡಿಟ್‌ನ ಬದ್ಧತೆಗೆ ಕಾರಣವಾಗುವುದಿಲ್ಲ.

15. ಯಾವುದೇ ಸಮಯದಲ್ಲಿ, ಯಾವುದೇ ಮುನ್ಸೂಚನೆ ಇಲ್ಲದೆ ಮತ್ತು ಯಾವುದೇ ಕಾರಣವನ್ನು ನೀಡದೆ, ಈ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಸೇರಿಸುವ/ಸಂಪಾದಿಸುವ/ಮಾರ್ಪಾಡು ಮಾಡುವ/ಬದಲಾಯಿಸುವ ಅಥವಾ ಸಂಪೂರ್ಣವಾಗಿ ಅಥವಾ ಭಾಗಶಃ ಹೊಸತರೊಂದಿಗೆ ಬದಲಿ ಮಾಡುವ ಅಥವಾ ಇದಕ್ಕೆ ಹೋಲಿಕೆ ಇರಲಿ ಅಥವಾ ಇಲ್ಲದಿರಲಿ, ಈ ಆಫರ್‌ಗಳು ಅಥವಾ ಸ್ಕೀಮ್ ಅನ್ನು ಇನ್ನೊಂದು ಆಫರ್ ಅಥವಾ ಸ್ಕೀಮ್‌ನೊಂದಿಗೆ ಬದಲಾಯಿಸುವ, ಅಥವಾ ಅದನ್ನು ಸಂಪೂರ್ಣವಾಗಿ ವಿಸ್ತರಿಸುವ ಅಥವಾ ಹಿಂಪಡೆಯುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಕಾಯ್ದಿರಿಸುತ್ತದೆ.

16. ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಆಫರ್ ಮತ್ತು/ಅಥವಾ ಸ್ಕೀಮ್‌ಗೆ ಬೇಕಾದ ಧನಸಹಾಯದ ಪಾಲುದಾರಿಕೆ ಟಿವಿಎಸ್ ಕ್ರೆಡಿಟ್ ಮತ್ತು ಮಾರಾಟಗಾರರು/ಉತ್ಪಾದಕರ ನಡುವಿನದ್ದಾಗಿರುತ್ತದೆ ಮತ್ತು ಇಲ್ಲಿ ಒಳಗೊಂಡಿರುವ ಯಾವುದೂ ಟಿವಿಎಸ್ ಕ್ರೆಡಿಟ್‌ನಲ್ಲಿ ಗ್ರಾಹಕರು ಪಡೆದ ಸಾಲದ ನಿಯಮ ಮತ್ತು ಷರತ್ತುಗಳ ಮೇಲೆ ಪೂರ್ವಾಗ್ರಹ ಅಥವಾ ಪರಿಣಾಮ ಬೀರುವುದಿಲ್ಲ. ಮೇಲಿನ ಸ್ಕೀಮ್‌ಗಳ ನಿಯಮಗಳು ಸಾಲದ ನಿಯಮ ಮತ್ತು ಷರತ್ತುಗಳಿಗೆ ಹೆಚ್ಚುವರಿಯಾಗಿರುತ್ತವೆಯೇ ಹೊರತು ಅದಕ್ಕಿಂತ ಕೆಳಮಟ್ಟದ್ದಾಗಿರುವುದಿಲ್ಲ.

17. ಯಾವುದೇ ಸಂದರ್ಭಗಳಲ್ಲಿ ಆಫರ್ ಮತ್ತು/ಅಥವಾ ಸ್ಕೀಮ್ ಅಡಿಯಲ್ಲಿ ನೀಡಲಾಗುವ ಪ್ರಯೋಜನವನ್ನು ಟಿವಿಎಸ್ ಕ್ರೆಡಿಟ್‌ ನಗದು ರೂಪದಲ್ಲಿ ಸೆಟಲ್ ಮಾಡುವುದಿಲ್ಲ.

18. ಪೋಸ್ಟ್ ಮಾಡಿದ ದಿನಾಂಕದಿಂದ 30 ದಿನಗಳವರೆಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ವಿಚಾರಣೆಗೆ ಪ್ರತಿಕ್ರಿಯಿಸಲಾಗುತ್ತದೆ. ಹೇಳಲಾದ ದಿನಾಂಕದ ನಂತರ ಟಿವಿಎಸ್ ಕ್ರೆಡಿಟ್ ಕಾರ್ಡ್‌ಹೋಲ್ಡರ್‌ಗಳಿಂದ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ಪತ್ರವ್ಯವಹಾರ ಅಥವಾ ಸಂವಹನವನ್ನು ಸ್ವೀಕರಿಸುವುದಿಲ್ಲ.

19. ಈ ಸ್ಕೀಮ್‌ಗೆ ಸಂಬಂಧಿಸಿದ ಎಲ್ಲಾ ಸಂವಹನ/ಸೂಚನೆಗಳನ್ನು "ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್, ಜಯಲಕ್ಷ್ಮಿ ಎಸ್ಟೇಟ್ಸ್, ನಂಬರ್ 29, ಹ್ಯಾಡೋಸ್ ರಸ್ತೆ, ಚೆನ್ನೈ, ತಮಿಳುನಾಡು- 600006" ಗೆ ತಲುಪಿಸಬೇಕು.

20. ಸ್ಕೀಮ್‌ಗೆ ಸಂಬಂಧಿಸಿದ ಎಲ್ಲಾ ವಿವಾದಗಳು ಚೆನ್ನೈನ ಸಮರ್ಥ ನ್ಯಾಯಾಲಯಗಳು/ನ್ಯಾಯಮಂಡಳಿಗಳ ವಿಶೇಷ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿರುತ್ತವೆ.

ಟೂ ವೀಲರ್ ಲೋನ್ ಆಫರ್ ನಿಯಮ ಮತ್ತು ಷರತ್ತುಗಳು :

1. ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್‌ನ ಸ್ವಂತ ವಿವೇಚನೆಯಿಂದ ಮಾತ್ರ ಸಾಲ

2. ಗ್ರಾಹಕರ ಪ್ರೊಫೈಲ್ ಆಧಾರದ ಮೇಲೆ ವಾಹನದ ಫಂಡಿಂಗ್ ಇರುತ್ತದೆ

3. ಬಾಹ್ಯ ಮಾನದಂಡಗಳನ್ನು ಅವಲಂಬಿಸಿ ಸಾಲದ ಅನುಮೋದನೆಯ ಅವಧಿಯು ಬದಲಾಗಬಹುದು

4. ಈ ಯೋಜನೆಯು ಭಾರತದಲ್ಲಿ ಅನ್ವಯವಾಗುವ ಎಲ್ಲಾ ಕೇಂದ್ರ, ರಾಜ್ಯ ಕಾನೂನುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

5. ಯಾವುದೇ ಕಾರಣದಿಂದ ಯಾವುದೇ ಸಮಯದಲ್ಲಿ ಯೋಜನೆಯಿಂದ ಯಾವುದೇ ವ್ಯಕ್ತಿಯನ್ನು ಹೊರಗಿಡುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಹೊಂದಿರುತ್ತದೆ.

6. ಟಿವಿಎಸ್ ಕ್ರೆಡಿಟ್ ಅಧಿಕೃತ ಡೀಲರ್‌ಗಳು ಮತ್ತು ಮಲ್ಟಿ-ಬ್ರ್ಯಾಂಡ್ ಔಟ್ಲೆಟ್‌ಗಳಿಂದ (ಎಂಬಿಒ) ಟೂ ವೀಲರ್ ಖರೀದಿಸಿದ ವ್ಯಕ್ತಿಗೆ ಮಾತ್ರ ಮತ್ತು ಭಾರತದಾದ್ಯಂತ ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಪಡೆದವರಿಗೂ ಕೂಡ ಈ ಸ್ಕೀಮ್ ಅನ್ವಯವಾಗುತ್ತದೆ.

7. ಈ ಸ್ಕೀಮ್ ಸಾಂಸ್ಥಿಕ, ಸಂಸ್ಥೆಯ ಅಥವಾ ಕಾರ್ಪೊರೇಟ್ ಖರೀದಿಗಳಿಗೆ ಅನ್ವಯವಾಗುವುದಿಲ್ಲ.

8. ಟಿವಿಎಸ್ ಕ್ರೆಡಿಟ್ ಉದ್ಯೋಗಿಗಳು ಮತ್ತು ಟಿವಿಎಸ್ ಕ್ರೆಡಿಟ್ ಮತ್ತು ಅವರ ಸಂಬಂಧಿಕರು, ಏಜೆಂಟ್‌ಗಳು, ವಿತರಕರು, ಡೀಲರ್‌ಗಳು ಇತ್ಯಾದಿಯವರನ್ನು ಹೊರತುಪಡಿಸಿ ಈ ಸ್ಕೀಮ್ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ.

9.ಬಡ್ಡಿ ದರವು ಬದಲಾಗಬಹುದು ಮತ್ತು ಗ್ರಾಹಕರ ಪ್ರೊಫೈಲ್ ಮತ್ತು ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ.

10. ಯಾವುದೇ ಎನ್‌ಡಿಎನ್‌ಸಿ (ನ್ಯಾಷನಲ್ ಡು ನಾಟ್ ಕಾಲ್) ನೋಂದಣಿ ನಿಯಮಾವಳಿಗೆ ಟಿವಿಎಸ್ ಕ್ರೆಡಿಟ್ ಜವಾಬ್ದಾರರಾಗಿರುವುದಿಲ್ಲ. ಈ ಮೂಲಕ ಭಾಗವಹಿಸುವ ಎಲ್ಲಾ ಗ್ರಾಹಕರು ಎನ್‌ಡಿಎನ್‌ಸಿ, ಡಿಎನ್‌ಡಿ (ಡು ನಾಟ್ ಡಿಸ್ಟರ್ಬ್) ಅಡಿಯಲ್ಲಿ ನೋಂದಣಿಯಾಗಿದ್ದರೂ, ಆಫರ್‌ನಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ ಕಾರಣದಿಂದ ಅಂತಹ ಶಾರ್ಟ್‌ಲಿಸ್ಟ್ ಮಾಡಿದ ಭಾಗವಹಿಸುವವರಿಗೆ ಕೂಡಾ ಕರೆ ಮಾಡಲು ಅಥವಾ ಎಸ್ಎಂಎಸ್ ಕಳುಹಿಸಲು ಮತ್ತು/ಅಥವಾ ಇಮೇಲ್ ಮಾಡಲು ಟಿವಿಎಸ್ ಕ್ರೆಡಿಟ್ ಮಾನ್ಯ ಅಧಿಕಾರವನ್ನು ಹೊಂದಿರುತ್ತದೆ.

11.ಪ್ರಕ್ರಿಯಾ ಶುಲ್ಕಗಳು ಮತ್ತು ಇತರ ಅನ್ವಯವಾಗುವ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

12.ಆಫರ್‌ನ ಮಾರಾಟ/ಮಾರ್ಕೆಟಿಂಗ್ ಮತ್ತು ಗ್ರಾಹಕರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಟಿವಿಎಸ್ ಕ್ರೆಡಿಟ್ ಏಜೆಂಟ್‌ಗಳ ಸೇವೆಗಳನ್ನು ಬಳಸಿಕೊಳ್ಳಬಹುದು

13. ಯೋಜನೆಗೆ ಸಂಬಂಧಿಸಿದಂತೆ ವಿವಾದ/ ವ್ಯತ್ಯಾಸದ ಸಂದರ್ಭದಲ್ಲಿ, ಅದನ್ನು ಬಗೆಹರಿಸಲು ಚೆನ್ನೈ ನ್ಯಾಯಾಲಯಗಳ ವಿಶೇಷ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತವೆ..

14. ಗ್ರಾಹಕರು ಅಥವಾ ಯಾವುದೇ ಇತರ ಸಂಸ್ಥೆ ಅಥವಾ ಘಟಕಕ್ಕೆ ಸೂಚನೆ ನೀಡದೆ ಈ ಯೋಜನೆಯನ್ನು ಭಾಗಶಃ ಅಥವಾ ಪೂರ್ಣವಾಗಿ ಬದಲಾಯಿಸುವ, ಮುಂದೂಡುವ, ಮಾರ್ಪಡಿಸುವ ಅಥವಾ ರದ್ದುಗೊಳಿಸುವ ಅಥವಾ ಆಫರ್‌ನ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಹೊಂದಿರುತ್ತದೆ.

15.ಟಿವಿಎಸ್ ಕ್ರೆಡಿಟ್ ನಿರ್ಧಾರವು ಎಲ್ಲಾ ವಿಷಯಗಳಲ್ಲೂ ಅಂತಿಮವಾಗಿರುತ್ತದೆ ಮತ್ತು ಈ ವಿಷಯದಲ್ಲಿ ಯಾವುದೇ ಸಂವಹನ, ಪ್ರಶ್ನೆಗಳು ಅಥವಾ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ.

16. ಇಲ್ಲಿ ಅಥವಾ ಕಾನೂನಿನಡಿಯಲ್ಲಿ ಒದಗಿಸಲಾದ ಹಕ್ಕು ಅಥವಾ ಪರಿಹಾರವನ್ನು ಚಲಾಯಿಸಲು ವಿಫಲವಾದರೆ ಅಥವಾ ವಿಳಂಬವಾದರೆ ಟಿವಿಎಸ್ ಕ್ರೆಡಿಟ್‌ನ ಭಾಗದಲ್ಲಿ ಹಕ್ಕು ಅಥವಾ ಇತರ ಹಕ್ಕುಗಳು ಮತ್ತು ಪರಿಹಾರಗಳನ್ನು ಮನ್ನಾ ಮಾಡಲಾಗುವುದಿಲ್ಲ.
ಇತರ ಸಾಲ ಸಂಬಂಧಿತ ನಿಯಮ ಮತ್ತು ಷರತ್ತುಗಳು ಕೂಡ ಅನ್ವಯವಾಗುತ್ತವೆ.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ